ಇದು 1990 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು ಪಿ. ಎಚ್. ವಿಶ್ವನಾಥ್ ಬರೆದು ನಿರ್ದೇಶಿಸಿದ್ದಾರೆ. ಇದು ಅವರು ಸ್ವತಂತ್ರವಾಗಿ ನಿರ್ದೇಶಿಸಿದ ಮೊದಲ ಚಿತ್ರವಾಗಿದೆ. ಸಂಭಾಷಣೆಗಳನ್ನು ಟಿ.ಎನ್. ಸೀತಾರಾಮ್ ಬರೆದಿದ್ದಾರೆ. ಇದರ ಪ್ರಮುಖ ಪಾತ್ರಗಳಲ್ಲಿ ರಮೇಶ್ ಅರವಿಂದ್, ಸುಧಾರಾಣಿ ಮತ್ತು ರಾಮಕೃಷ್ಣ ಇದ್ದಾರೆ. ಈ ಚಿತ್ರದ ಸಂಗೀತವನ್ನು ಸಂಗೀತರಾಜ ಸಂಯೋಜಿಸಿದ್ದಾರೆ. ಈ ಚಲನಚಿತ್ರವು 1989-90ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದಿದೆ.ಈ ಚಲನಚಿತ್ರವನ್ನು 1997ರಲ್ಲಿ ತೆಲುಗು ಭಾಷೆಯಲ್ಲಿ ರೀಮೇಕ್ ಮಾಡಲಾಯಿತು. == ಪಾತ್ರವರ್ಗ == ರಮೇಶ್ ಆನಂದನ ಪಾತ್ರದಲ್ಲಿ ಸುಧಾರಾಣಿ ರುಕ್ಮಿಣಿಯಾಗಿ ರಾಮಕೃಷ್ಣ ರವಿ ಆಗಿ ಗೀತಾ ಕಾಶಿ ಕೃಷ್ಣೇಗೌಡ ಶರಭಯ್ಯನಾಗಿ ನಾಗೇಂದ್ರ ಶಾ ಸುಜಾತಾ ಗೀತಾಂಜಲಿ ಸುಂದರಮ್ಮ == ಚಿತ್ರಸಂಗೀತ == ಈ ಚಿತ್ರದ ಸಂಗೀತವನ್ನು ಸಂಗೀತರಾಜ ಸಂಯೋಜಿಸಿದ್ದಾರೆ.